#ಮಯೂರ ಎಂದಾಗ ನೆನಪಿಗೆ ಬರುವುದು, ನಟ ಸಾರ್ವಭೌಮ ರಾಜ್ಕುಮಾರ್ ಅವರು, ತೆರೆಯ ಮೇಲೆ ಬಂದ ಮಯೂರದ ಮೂಲ ಒಂದು ಕಾದಂಬರಿ. ಆ ಕಾದಂಬರಿ ಬರೆದವರೇ
ಮಯೂರಕ್ಕೆ ಕಥೆ ಚಿತ್ರಕಥೆ ಬರೆದದ್ದು, ಅವರೇ #ದೇವುಡು.

ದೇವುಡು ನರಸಿಂಹ ಶಾಸ್ತ್ರಿ ಎಂಬ ಮಹಾನ್ ವ್ಯಕ್ತಿಯ ಪರಿಚಯ ನನಗಾಗಿದ್ದು ಪ್ರೌಢ ಶಾಲೆ ವಿದ್ಯಾರ್ಥಿಯಾಗಿದ್ದಾಗ.
ಅಂತರ್ ಶಾಲಾ ಮಟ್ಟದ
ಸ್ಪರ್ಧೆಯಲ್ಲಿ ಮೊದಲನೇ ಪ್ರಶಸ್ತಿ ಗೆದ್ದ ನನಗೆ ದಕ್ಕಿದ್ದು ಈ ಮಹನೀಯರ 3 ಪುಸ್ತಕಗಳು.
ಭಾರತದ ಮಹಾಪುರುಷರು, ಮಹಾ ಬ್ರಾಹ್ಮಣ, ಮಹಾ ಕ್ಷತ್ರಿಯ.

ದೇವುಡು ಅವರು 1895 ಡಿಸೆಂಬರ 30 ರಂದು ವೇದ ಶಾಸ್ತ್ರಪಾರಂಗತ ಕುಟುಂಬದಲ್ಲಿ ಜನಿಸಿದರು. ತಾಯಿ ಸುಬ್ಬಮ್ಮ; ತಂದೆ ಕೃಷ್ಣಶಾಸ್ತ್ರೀ. ದೇವುಡು 5 ವರ್ಷದ ಬಾಲಕರಿದ್ದಾಗ ಇವರ ತಂದೆ ತೀರಿಕೊಂಡರು.
ತಮ್ಮ ೫ನೆಯ ವಯಸ್ಸಿಗಾಗಲೆ ಸಂಸ್ಕೃತದ ಅಮರಕೋಶ, ಶಬ್ದ ಮತ್ತು ರಘುವಂಶಗಳನ್ನು ಕಲಿತುಕೊಂಡ ದೇವುಡು ಅವರ ಪ್ರಾಥಮಿಕ, ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣವೆಲ್ಲ ಮೈಸೂರಿನಲ್ಲಿಯೆ ನಡೆಯಿತು. 1917ರಿಂದ 1922ರವರೆಗೆ ಇವರು ಮೈಸೂರಿನ ಮಹಾರಾಜಾ ಕಾಲೇಜು ಹಾಗು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಎಮ್.ಎ.ದಲ್ಲಿ ಸಂಸ್ಕೃತ ಮತ್ತು
ದರ್ಶನಶಾಸ್ತ್ರವನ್ನು ಅಧ್ಯಯನದ ವಿಷಯವನ್ನಾಗಿ ಆರಿಸಿಕೊಂಡಿದ್ದರು.
1923-24 ಈ ಅವಧಿಯಲ್ಲಿ ದೇವುಡುರವರು ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದರು. 1924ರಲ್ಲಿ ಕೆಲಕಾಲ ಶೃಂಗೇರಿಯ ಶಂಕರಾಚಾರ್ಯ ಮಠದಲ್ಲಿ ಪೇಶ್ಕಾರ್ ಎಂದು ಕಾರ್ಯ ನಿರ್ವಹಿಸಿದರು. ಆಬಳಿಕ ಬೆಂಗಳೂರಿಗೆ ಬಂದು 1929ರವರೆಗೆ ಆರ್ಯವಿದ್ಯಾಶಾಲೆಗೆ
ಮುಖ್ಯೋಪಾಧ್ಯಾಯರಾದರು. ಈ ಸಂಸ್ಥೆಯನ್ನು ಕಾರಣಾಂತರಗಳಿಂದ ಬಿಟ್ಟು MPL ಶಾಸ್ತ್ರಿಯವರು ಸ್ಥಾಪಿಸಿದ್ದ ಗಾಂಧಿನಗರ ಪ್ರೌಢಶಾಲೆಯನ್ನು 5 ವರ್ಷಗಳವರೆಗೆ ನಡೆಯಿಸಿದರು.
(ನಾನು ಮತ್ತು ನನ್ ಅಪ್ಪ ಇಬ್ರೂ ಅದೇ ಶಾಲೇಲಿ ಓದಿದ್ದು, ಅವನತಿಯತ್ತ ಸಾಗಿದ್ದ ಆ ಶಾಲೆಯನ್ನು ಈಗ ಭಾರತೀಯ ವಿದ್ಯಾಭವನ ಅವರ ಆಡಳಿತದಲ್ಲಿದೆ)

1927ರಲ್ಲಿ ನವಜೀವನ ಪತ್ರಿಕಾ
ಸಂಪಾದಕರಾಗಿ ಪತ್ರಿಕೋದ್ಯಮ ಪ್ರವೇಶಿಸಿದ ದೇವುಡು, 1936 ಹಾಗು 1938ರಲ್ಲಿ ರಂಗಭೂಮಿ ಪತ್ರಿಕೆಯ ಸಂಪಾದಕರಾಗಿದ್ದರು. 1936ರಿಂದ 1957ರವರೆಗೆ 21 ವರ್ಷಗಳ ದೀರ್ಘ ಕಾಲ ನಮ್ಮ ಪುಸ್ತಕ ಎಂಬ ಸ್ವತಂತ್ರ ಮಕ್ಕಳ ಪತ್ರಿಕೆಯನ್ನು ನಡೆಯಿಸಿಕೊಂಡು ಬಂದರು. ಈ ನಡುವೆ 1935-1936ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆಯ ಸಂಪಾದನೆಯನ್ನೂ ಮಾಡಿದರು.
ನಾಟಕ ಹಾಗು ಸಾಹಿತ್ಯ ಇವು ದೇವುಡುರವರ ಇನ್ನೆರಡು ಹವ್ಯಾಸಗಳು. 1921ರಲ್ಲಿಯೆ ಇವರು ಚಾಮುಂಡೇಶ್ವರಿ ಕಂಪನಿಯಲ್ಲಿ ನಟರಾಗಿ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ್ದರು. 1926ರಲ್ಲಿ ಅಮೆಚೂರ್ ಕಂಪನಿಯ ಸದಸ್ಯರಾಗಿದ್ದರು. ಕರ್ನಾಟಕ ಫಿಲ್ಮ್ ಕಾರ್ಪೋರೇಶನ್ ಸ್ಥಾಪಿಸಿದ ದೇವುಡು 1934ರಲ್ಲಿ ಭಕ್ತ ಧ್ರುವ ಚಲನಚಿತ್ರಕ್ಕೆ ಸಾಹಿತ್ಯರಚನೆ ಮಾಡಿದರು.
1936ರಲ್ಲಿ ಚಿರಂಜೀವಿ ಎನ್ನುವ ಚಲನಚಿತ್ರಕ್ಕೆ ಸಾಹಿತ್ಯರಚನೆ ಮಾಡಿದ್ದಲ್ಲದೆ, ಆ ಚಿತ್ರದಲ್ಲಿ ಮೃಕಂಡು ಋಷಿಯ ಪಾತ್ರ ವಹಿಸಿದ್ದರು.

ದೇವುಡು 1930ರಲ್ಲಿ ಮೈಸೂರು ಹಿಂದಿ ಪ್ರಚಾರಕ ಸಭೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. 1937ರಲ್ಲಿ ಕನ್ನಡಸಾಹಿತ್ಯ ಸಮಾಜವನ್ನು ಸ್ಥಾಪಿಸಿದರು. 1939ರಿಂದ 1942ರವರೆಗೆ ಮೈಸೂರು ಸಂಸ್ಥಾನದಲ್ಲಿ ನಡೆದ
ಅಕ್ಷರಪ್ರಚಾರ ಯೋಜನೆ ಹಾಗು ವಯಸ್ಕರ ಅಕ್ಷರಪ್ರಚಾರ ಯೋಜನೆಗಳಲ್ಲಿ ಭಾಗಿಯಾಗಿದ್ದರು. 1943-1945ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ನೇಮಕವಾಗಿದ್ದರು. 1946ರಲ್ಲಿ ಬೆಂಗಳೂರು ಸಿಟಿ ಕೋಆಪರೇಟಿವ್ ಬ್ಯಾಂಕಿನ ಡೈರೆಕ್ಟರ ಹಾಗು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿದ್ದರು. 1948ರಲ್ಲಿ ಬೆಂಗಳೂರು ಸಿಟಿ ಕಾರ್ಪೋರೇಶನ್ ಸದಸ್ಯರಾಗಿ
ಚುನಾಯಿತರಾದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗಿಯಾದರು. 1950ರಲ್ಲಿ ಶಂಕರಪುರದಲ್ಲಿ ಗೀರ್ವಾಣವಿದ್ಯಾಪೀಠವನ್ನು ಸ್ಥಾಪಿಸಿದರು. 1956-1959ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.
ದೇವುಡು ಅವರ ಸೂಚನೆಯಂತೆ ಕೆಂಗಲ್ ಹನುಮಂತಯ್ಯನವರು 1953ರ ಸುಮಾರಿಗೆ ಕನ್ನಡ ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು
ತೆರೆದು, ನಿರ್ದೇಶಕರಾಗಲು ಕೇಳಿಕೊಂಡರು. ಆದರೆ ದೇವುಡು ಅದಕ್ಕೆ ಒಪ್ಪದೆ ಶ್ರೀ ಸಿ.ಕೆ.ವೆಂಕಟರಾಮಯ್ಯನವರನ್ನು ಆ ಕಾರ್ಯಕ್ಕೆ ಸೂಚಿಸಿದರು.

ಸಂಸ್ಕೃತಿಪ್ರಚಾರಕ್ಕಾಗಿ, ಭಗವದ್ಗೀತೆ ಸಂದೇಶ ಪ್ರಚಾರಕ್ಕಾಗಿ ತಮ್ಮ ಜೀವಿತಾವಧಿಯ ನಾಲ್ವತ್ತು ವರ್ಷಕ್ಕೂ ಮಿಕ್ಕಿ ದೇವುಡು ನೂರಾರು ಲೇಖನ ಬರೆದರು ಹಾಗು ಭಾಷಣಗಳನ್ನು ಮಾಡಿದರು.

1952ರಲ್ಲಿ
ದೇವುಡುರವರು ಉಡುಪಿಯಲ್ಲಿ ಗೀತೆಯ ಬಗೆಗೆ ಉಪನ್ಯಾಸ ಪ್ರಾರಂಭಿಸುತ್ತಿದ್ದಾಗಲೆ ಇವರ ಹಿರಿಯ ಮಗ ರಾಮು ತೀರಿಕೊಂಡ ಸುದ್ದಿ ತಿಳಿಯಿತು. ಸ್ವಲ್ಪವೂ ಅಳುಕದ ದೇವುಡು ಭಾಷಣ ಮುಗಿಯಿಸಿದ ನಂತರವೇ ವೇದಿಕೆಯಿಂದ ನಿರ್ಗಮಿಸಿದಾಗ ಗೀತೆಯ ಸ್ಥಿತಪ್ರಜ್ಞ ಮನೋಭಾವನೆಯನ್ನು ಇವರು ಜೀವನದಲ್ಲಿ ಸಾಧಿಸಿದ ಬಗೆ ಸ್ನೇಹಿತರ ತಿಳಿವಿಗೆ ಬಂದಿತು.
ಸಾಂಸ್ಕೃತಿಕವಾಗಿ
ಎಷ್ಟೆ ಸಂಪನ್ನರಾಗಿದ್ದರೂ, ದೇವುಡು ಬಡತನದಲ್ಲೆ ಬಾಳಿದರು. ಇವರು ಬರಿಗಾಲಿನಲ್ಲಿ ನಡೆದಾಡುತ್ತಾರೆಂದು ನೊಂದುಕೊಂಡ ಇವರ ಶಿಷ್ಯನೊಬ್ಬ ಇವರಿಗೆ ಕೊಡಿಸಿದ ಮೆಟ್ಟುಗಳಿಂದ ಇವರ ಕಾಲಿಗೆ ಗಾಯವಾಯಿತು. ಮಧುಮೇಹಿಗಳಾದದ್ದರಿಂದ ಗಾಯ ಬಲಿತು 1959ರಲ್ಲಿ ಒಂದು ಕಾಲನ್ನೆ ತೆಗೆಯಬೇಕಾಯಿತು. ಇದು ಅವರ ಸಾರ್ವಜನಿಕ ಜೀವನದ ಕೊನೆಗೆ ಕಾರಣವಾಯಿತು.

ದೇವುಡು
ಅವರಿಗೆ ಒಲಿದ ಪುರಸ್ಕಾರಗಳು, ಗೌರವಗಳು

1938ರಲ್ಲಿ “ಮೀಮಾಂಸಾ ದರ್ಪಣ”ಕ್ಕೆ ಶ್ರೀಮನ್ಮಹಾರಾಜರಿಂದ ವಿಶೇಷ ಪ್ರಶಸ್ತಿ
1952ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಂದ ಕಾಶಿಯಲ್ಲಿ ಗೌರವ; ಕನ್ನಡ ಕಾದಂಬರಿಕಾರರ ಸಮ್ಮೇಳನದ ಅಧ್ಯಕ್ಷತೆ
1963ರಲ್ಲಿ “ಮಹಾಕ್ಷತ್ರಿಯ” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು
ಮರಣೋತ್ತರವಾಗಿ ದೊರಕಿತು.

ಕನ್ನಡ ತಾಯಿಯ ಸೇವೆ ಮಾಡುತ್ತ ದೇವುಡು ಅವರು 1962 ಅಕ್ಟೋಬರ 27ರಂದು ಕನ್ನಡ ದೇವಿಯ ಬಳಿ ತೆರಳಿದರು.

#ವಂದೇಮಾತರಂ
ನನ್ನದು ಹೊಸ ಅಕೌಂಟ್ ಆಗಿರುವುದರಿಂದ, ಪರಿಚಯಸ್ಥರನ್ನು
ಟ್ಯಾಗ್ ಮಾಡುತ್ತೇನೆ..
ಅನ್ಯಥಾ ಭಾವಿಸಬೇಡಿ.🙏🙏🙏

@girishalva @gururaj_mj @GunduHuDuGa @Heisenberg369 @HarshaVasishta @hamsanandi @IAnnapurnna @indtravelphoto @iAnilRamesh @KannadathiVidya @siddidatri @rayara_magalu @mosrubajji @meenabg
ನನ್ನದು ಹೊಸ ಅಕೌಂಟ್ ಆಗಿರುವುದರಿಂದ, ಪರಿಚಯಸ್ಥರನ್ನು
ಟ್ಯಾಗ್ ಮಾಡುತ್ತೇನೆ..
ಅನ್ಯಥಾ ಭಾವಿಸಬೇಡಿ.🙏🙏🙏

@MindfulOblivion @asha_ny @naanu_sheeku @shub_nudi @OggaraNe @Themangofellow @yessirtns @shanubhogrU @ArurangaS @msthippanna @tweets_tinku @Urban_Chanakya @_ugra_ @VinuVeda
You can follow @sheshapatangi1.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.